ಸಿಐಡಿ ಅಧಿಕಾರಿಗಳ ಸೋಗಿನಲ್ಲಿ ವಂಚನೆ
ಹುಬ್ಬಳ್ಳಿ: ಸಿಐಡಿ ಅಧಿಕಾರಿಗಳ ಸೋಗಿನಲ್ಲಿ ಮಹಿಳೆಯೊಬ್ಬರನ್ನು ಹೆದರಿಸಿ, ಅವರಿಂದ ₹30,000 ವರ್ಗಾಯಿಸಿಕೊಂಡು ವಂಚಿಸಲಾಗಿದೆ.
ಗೋಕುಲ ರಸ್ತೆಯಲ್ಲಿರುವ ಮನೆಯೊಂದಕ್ಕೆ ಬಂದ ಅಪರಿಚಿತರಿಬ್ಬರು, ಸಿಐಡಿ ಅಧಿಕಾರಿಗಳು ಎಂದು ಹೇಳಿಕೊಂಡಿದ್ದಾರೆ. ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವುದಾಗಿ ಆರೋಪಿಸಿ, ವಿಡಿಯೊ ಮಾಡಿದ್ದಾರೆ. ₹50,000 ನೀಡದಿದ್ದರೆ ವಿಡಿಯೊವನ್ನು ಮಾಧ್ಯಮದವರಿಗೆ ನೀಡುವುದಾಗಿ ಹೆದರಿಸಿ, ಕೊನೆಗೆ ₹30,000 ಫೋನ್ ಪೇ ಮಾಡಿಸಿಕೊಂಡು ಪರಾರಿಯಾಗಿದ್ದಾರೆ.
ಈ ಕುರಿತು ಗೋಕುಲ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.