Ad imageAd image

ಅನೈತಿಕ ಸಂಬಂಧ; ಪೊಲೀಸ್ ಆತ್ಮಹತ್ಯೆ

Hubballi Dhwani
ಅನೈತಿಕ ಸಂಬಂಧ; ಪೊಲೀಸ್ ಆತ್ಮಹತ್ಯೆ
WhatsApp Group Join Now
Telegram Group Join Now

ಅನೈತಿಕ ಸಂಬಂಧ; ಪೊಲೀಸ್ ಆತ್ಮಹತ್ಯೆ

ಒಂದೇ ವೇಲ್‌ಗೆ ಕೊರಳೊಡ್ಡಿದ ಪ್ರೇಮಿಗಳು

 

ಹುಬ್ಬಳ್ಳಿ: ಕಾನಸ್ಟೇಬಲ್ ಹಾಗೂ ವಿವಾಹಿತ ಮಹಿಳೆಯೊಬ್ಬಳು ಒಂದೇ ವೇಲ್‌ಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಧಾರವಾಡ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಾಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹೇಶ ಹೆಸರೂರು ಹಾಗೂ ವಿಜಯಲಕ್ಷ್ಮೀ ವಾಲಿ ಆತ್ಮಹತ್ಯೆ ಮಾಡಿಕೊಂಡವರು.
ಇಬ್ಬರು ವಿವಾಹಿತರಾಗಿದ್ದರು. ಅನೈತಿಕ ಸಂಬಂಧ ಹೊಂದಿದ್ದರು ಎನ್ನಲಾಗಿದೆ.
ಧಾರವಾಡ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಾಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹೇಶ ಹೆಸರೂರು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ, ಚೇತನಾ ಕಾಲೇಜು ಬಳಿಯ ಫಾಸ್ಟಸ್ಟ್ ಫುಡ್ ಅಂಗಡಿ ನಡೆಸುತ್ತಿದ್ದ ವಿಜಯಲಕ್ಷ್ಮೀ ವಾಲಿ ಎಂಬಾಕೆಯ ಜೊತೆ ಅನೈತಿಕ ಸಂಬಂಧ ಬೆಳೆದಿತ್ತು. ಈ ವಿಷಯ ಮಹೇಶನ ಕುಟುಂಬದವರಿಗೆ ತಿಳಿದು ಜಗಳ ಆಗಿ ರಾಜಿ ಪಂಚಾಯತಿ ಕೂಡಾ ಆಗಿತ್ತು.
ಆತ್ಮಹತ್ಯೆ ಮಾಡಿಕೊಂಡ ಮಹೇಶ ವಿವಾಹಿತನಾಗಿದ್ದ ವಿಜಯಲಕ್ಷ್ಮೀ ಕೂಡಾ ವಿವಾಹ ಆಗಿದ್ದು, ಎರಡು ಮಕ್ಕಳ ತಾಯಿಯಾಗಿದ್ದಳು.ಕಳೆದ ೧೫ ದಿನಗಳ ಹಿಂದೆ ಶಿವಾನಂದ ನಗರದಲ್ಲಿ ಬಾಡಿಗೆ ಮನೆಯನ್ನು ಮಾಡಿಕೊಂಡು ವಾಸವಿದ್ದರು. ಇಲ್ಲಿದ್ದ ಸ್ಥಳೀಯರು ಕೂಡಾ ಇವರನ್ನು ಗಂಡ ಹೆಂಡತಿ ಅಂತಾ ತಿಳಿದಿದ್ದರು.
ಬೆಳಿಗ್ಗೆಯಿಂದ ದುರ್ವಾಸೆ ಕಂಡು ಬಂದ ಹಿನ್ನೆಲೆಯಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ನವನಗರ ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.

WhatsApp Group Join Now
Telegram Group Join Now
Share This Article
error: Content is protected !!