ಚಿರತೆ ಸೆರೆಗೆ ಜಮೀನಿನಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ
ಚಿರತೆಯೋ, ಕೆನ್ನಯಿಯೋ, ಕತ್ತೆ ಕಿರುಬನೋ ?
ಕಲಘಟಗಿ: ತಾಲೂಕಿನ ಮಲಕನಕೊಪ್ಪ ಗ್ರಾಮದ ಹೊರವಲಯದಲ್ಲಿ ಕಾಣಿಸಿಕೊಂಡ ಪ್ರಾಣಿ ಯಾವುದು ಎಂಬ ಗೊಂದಲ ಎಲ್ಲರಲ್ಲೂ ಸೃಷ್ಟಿಯಾಗಿದೆ.
ಮಲಕನಕೊಪ್ಪ ಸುತ್ತಮುತ್ತ ಪ್ರದೇಶದಲ್ಲಿ ಚಿರತೆಯನ್ನು ಹೊಲುವ ಹೆಜ್ಜೆ ಗುರುತುಗಳು ಕಾಣಿಸಿಕೊಂಡಡಿದ್ದವು. ಇದಲ್ಲದೇ ಚಿರತೆಯನ್ನೇ ಹೊಲುವ ಪ್ರಾಣಿಯನ್ನು ಕಂಡಿದ್ದಾಗಿ ಕೆಲವರು ಆತಂಕವನ್ನು ವ್ಯಕ್ತಪಡಿಸಿದ್ದರು.
ಈ ಹಿನ್ನೆಲೆಯಲ್ಲಿ ಕಾರ್ಯ ಪೃವತ್ತರಾದ ಅರಣ್ಯ ಇಲಾಖೆ ಅಧಿಕಾರಿಗಳು ಪ್ರಾಣಿಯನ್ನು ಸೆರೆ ಹಿಡಿಯಲು ಮುಂದಾಗಿದ್ದಾರೆ. ಇದೀಗ ಕಾಡುಪ್ರಾಣಿ ಹಿಡಿಯುವ ಉದ್ದೇಶದಿಂದ ನಾಯಿಯೊಂದನ್ನು ಕಟ್ಟಿ ಹಾಕಲಾಗಿತ್ತು. ಅಲ್ಲಿಯೇ ಸಿಸಿ ಕ್ಯಾಮೆರವನ್ನು ಅಳವಡಿಸಲಾಗಿತ್ತು. ಕಣ್ತಪ್ಪಿಸಿ ಬಂದಿರುವ ಪ್ರಾಣಿ ನಾಯಿಯನ್ನು ತಿಂದು ಹಾಕಿ ಮರೆಯಾಗಿದೆ. ಇದು ಅರಣ್ಯಾಧಿಕಾರಿಗಳು ಸವಾಲಾಗಿದೆ. ಇದರ ಮಧ್ಯೆ ಹಳೆಯ ವಿಡಿಯೋ ಒಂದನ್ನು ಹರಿಬಿಟ್ಟಿರುವ ಕಿಡಗೇಡಿಗಳು ಅಧಿಕಾರಿಗಳ ಕಾರ್ಯಾಚರಣೆಗೆ ತೊಂದರೆ ನೀಡುತ್ತಿದ್ದಾರೆ.
ಚಿರತೆಯೋ, ಕೆನ್ನಯಿಯೋ, ಕತ್ತೆ ಕಿರುಬನೋ ? ಎಂಬುವುದೇ ಈವರೆಗೂ ತಿಳಿದು ಬಂದಿಲ್ಲ. ಕಾಡು ಪ್ರಾಣಿಯ ಪತ್ತೆಗೆ ಹೊಸ ತಂತ್ರದ ಮೊರೆ ಹೋಗಿರುವ ಅರಣ್ಯಾಧಿಕಾರಿಗಳು ಸಿಸಿ ಕ್ಯಾಮೆರಾ ಬೇರೆಡೆ ಅಳವಡಿಸಿ ಪ್ರಾಣಿ ಗುರುತಿನ ಜೊತೆಗೆ ಸೆರೆಗೆ ಮುಂದಾಗಿದ್ದಾರೆ. ಕೂಡಲೇ ಕಾಡುಪ್ರಾಣಿ ಸೆರೆ ಹಿಡಿದು ಸುತ್ತಮುತ್ತಲಿನ ಗ್ರಾಮಸ್ಥರ ಆತಂಕ ದೂರ ಮಾಡಬೇಕು ಎಂಬುವುದು ನಮ್ಮ ಒತ್ತಾಯವಾಗಿದೆ.