ಮತ್ತೊಮ್ಮೆ ಗುಡುಗಿದ ನಿರಂಜನ ಹಿರೇಮಠ
ರಕ್ಷಣೆ ನೀಡಲು ಸಾಧ್ಯವಾಗದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ
ಹುಬ್ಬಳ್ಳಿ; ರಾಜ್ಯದ ಜನತೆಗೆ ರಕ್ಷಣೆ ನೀಡಲು ಸಾಧ್ಯವಾಗದಿದ್ದರೆ ಮನಗೆ ಹೋಗಿ ಎಂದು ಗೃಹ ಸಚಿವರ ವಿರುದ್ಧ ಮತ್ತೊಮ್ಮೆಪಾಲಿಕೆ ಸದಸ್ಯ ನಿರಂಜನ ಹಿರೇಮಠ ಗುಡುಗಿದ್ದಾರೆ.
ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ನಡೆದ ಕೊಲೆ ಪ್ರಕರಣ ಖಂಡಿಸಿ ಶನಿವಾರ ನಗರದಲ್ಲಿ ವಿವಿಧ ಮಠಾಧೀಶರ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನಾ ವೇದಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ನನ್ನ ಮಗಳನ್ನು ಹತ್ಯೆ ಮಾಡಲಾಯಿತು, ಇದೀಗ ನಮ್ಮ ವಾರ್ಡನ ಮಗಳಾದ ಅಂಜಲಿ ಕೊಲೆ ಮಾಡಲಾಗಿದೆ. ಗೃಹ ಸಚಿವರು ರಕ್ಷಣೆ ಕೊಡಲು ಆಗದಿದ್ದರೆ ರಾಜಿನಾಮೆ ಕೊಟ್ಟು ಮನೆಗೆ ಹೋಗಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಸಹೋದರಿಯರ ಮದುವೆ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಮೂರು ಸಾವಿರ ಮಠದ ಶ್ರೀಗಳು ವಿದ್ಯಾಭ್ಯಾಸದ ಜವಾಬ್ದಾರಿಯ ಹೊಣೆ ಹೊತ್ತಿದ್ದಾರೆ. ಅಂಜಲಿ ಕುಟುಂಬದವರಿಗೆ ನ್ಯಾಯ ಸಿಗುವವರೆಗೆ ಹೋರಾಟ ನಿಲ್ಲಲ್ಲ ಎಂದು ಎಚ್ಚರಿಸಿದರು.
ಕಾಂಗ್ರೆಸ್ ಮಹಿಳಾ ಘಟಕ ಏನು ಮಾಡುತ್ತಿದೆ ಎಂದು ನಿರಂಜನ್ ಹಿರೇಮಠ ಪ್ರಶ್ನಿಸಿದರು.ನೇಹಾ, ಅಂಜಲಿ ಹತ್ಯೆ ಖಂಡಿಸಿ ಒಂದು ದೀಪ ಹಚ್ಚಲು ಇವರಿಗೆ ಆಗಲಿಲ್ಲ. ನಾನು ಕಾಂಗ್ರೆಸ್ ಪಕ್ಷದಲ್ಲಿದ್ದರೂ ಹೋರಾಟದಿಂದ ಹಿಂದೆ ಸರಿಯಲ್ಲ. ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ. ಕಾಂಗ್ರೆಸ್ ಪಕ್ಷದ ಜನಪ್ರತಿನಿಧಿಗಳೇ ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ. ಹಲವು ಮುಖಂಡರು ನಮ್ಮ ಮನೆಗೆ ಸಾಂತ್ವನ ಹೇಳಲು ಬರದಂತೆ ತಡೆದಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ಧಾರವಾಡ ಜಿಲ್ಲಾಕಾರಿ ದಿವ್ಯ ಪ್ರಭು ಮತ್ತು ಹುಬ್ಬಳ್ಳಿ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್ ಅವರ ಮೂಲಕ ಸ್ವಾಮೀಜಿಗಳು ರಾಜ್ಯ ಸರ್ಕಾರ ಮನವಿ ಪತ್ರ ಸಲ್ಲಿಸಿದರು. ಸೂಕ್ತ ತನಿಖೆ ಮತ್ತು ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಮನವಿ ಮಾಡಿದರು.