Ad imageAd image

ಕೋಣದ ಕಥೆಯೊಂದಿಗೆ ಸಿಂಹರೂಪಿಣಿ 

Hubballi Dhwani
ಕೋಣದ ಕಥೆಯೊಂದಿಗೆ ಸಿಂಹರೂಪಿಣಿ 
WhatsApp Group Join Now
Telegram Group Join Now

ಸಿಂಹರೂಪಿಣಿ ಇದೊಂದು ಮಾರಮ್ಮ ದೇವಿಯ ಕುರಿತ ಚಿತ್ರ. ಪಕ್ಕಾ ಕಮರ್ಷಿಯಲ್ ಎಂಟರ್ಟೈನ್ಮೆAಟ್ ಅಂಶಗಳೊAದಿಗೆ ಮೂಡಿಬಂದಿದ್ದು, ಸದ್ಯ ೨೫ ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. 

ಅದ್ದೂರಿ ತಾರಾಗಣದೊಂದಿಗೆ ಅಚ್ಚುಕಟ್ಟಾಗಿ ಮೂಡಿಬಂದಿರುವ ಚಿತ್ರ. ಈ ಚಿತ್ರದಲ್ಲಿ ಮಂಡ್ಯ ಶೈಲಿಯ ಜೊತೆಗೆ ಉತ್ತರ ಕರ್ನಾಟಕದ ಭಾಷೆ ಸೊಗಡನ್ನು ತೋರಿಸಲಾಗಿದೆ. ಗ್ರಾಮದೇವತೆಗೆ ಕೋಣವನ್ನು ಯಾಕೆ ಬಲಿಕೊಡುತ್ತಾರೆ. ಅದರ ಹಿನ್ನಲೆ ಏನು ಎಂದು ಎಂದು ಚಿತ್ರದಲ್ಲಿ ತೋರಿಸಿದ್ದು. ಅದು ಜನರನ್ನು ಮಂತ್ರ ಮುಗ್ಧರನ್ನಾಗಿಸಿ ಸೆಳೆಯುತ್ತಿದೆ ಎಂದು ನಿರ್ದೇಶಕ ,ಚಿತ್ರ ಸಾಹಿತಿ ಕಿನ್ನಾಳ ರಾಜ್ ಹೇಳಿದರು.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯಶ್ ಶೆಟ್ಟಿ.ಅಂಕಿತ ಗೌಡ. ಸಾಗರ್. ಯಶಸ್ವಿನಿ. ಹರೀಶ್ ರೈ. ತಬಲಾ ನಾಣಿ. ತೆಲುಗಿನ ಸುಮನ್ ತಲ್ವಾರ್. ದಿನೇಶ್ ಮಂಗಳೂರು. ತಮಿಳಿ ನ ಸಾಯಿ ದಿನ. ನೀನಾಸಂ ಅಶ್ವಥ್. ವಿಜಯ ಚಂಡೂರ್. ಅವರಂತಹ ಸುಮಾರು ನೂರಾರು ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ನಾನು ಸಹ ಉತ್ತರ ಕರ್ನಾಟಕ ಭಾಗದವನಾಗಿದ್ದು. ಇಲ್ಲಿನ ಯುವ ಪ್ರತಿಭೆಗಳಿಗೂ ಸಹ ಮುಖ್ಯ ಪಾತ್ರದಲ್ಲಿ ತೋರಿಸಿದ್ದೇನೆ ಎಂದು ಹೇಳಿದರು.

ವಿಶೇಷ ಪಾತ್ರದಲ್ಲಿ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರ್ ಅವರು ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೂಲತಃ ಸಾಹಿತಿಯಾಗಿ ಕೆಜಿಎಫ್. ಜಂಟಲ್ ಮ್ಯಾನ್. ಅಂಜನಿ ಪುತ್ರ.ಕಬ್ಜ . ಸಲಾರ್. ಸದ್ಯಕ್ಕೆ ಬಿಡುಗಡೆಯಾಗಿರುವ ಭೈರತಿ ರಣಗಲ್ ಚಿತ್ರಕ್ಕೆ ಹಾಡು ೫ ಬರೆದಿರುವೆ. ಈಗ ನಿರ್ದೇಶಕನಾಗಿ ನಿಮ್ಮ ಮುಂದೆ ಬಂದಿದ್ದೇನೆ.ಅದು ನಮ್ಮ ಸೊಗಡಿನ ಚಿತ್ರದೊಂದಿಗೆ.ದಯವಿಟ್ಟು ನಿಮ್ಮ ಸಹಕಾರ ಅಗತ್ಯ ಎಂದೂ ಕಿನ್ನಾಳ ರಾಜ್ ಅವರು ಮಾತು ಮುಗಿಸಿದರು.

ಈ ಚಿತ್ರದಲ್ಲಿ ನಟಿಸಿದ ಹುಬ್ಬಳ್ಳಿಯ ಬಾಲ ನಟಿ ಸಾಯಿ ಸಮೀಕ್ಷಾ. ಇಳಕಲ್ ಪ್ರತಿಭೆ ಮಲ್ಲಿಕಾರ್ಜುನ್ ಅವರು ತಮ್ಮ ಪಾತ್ರದ ಬಗ್ಗೆ ಅಭಿಪ್ರಾಯ ಹಂಚಿಕೊAಡು ಸಹಕಾರ ಕೋರಿದರು.

 ಕೆ ಎಂ ನಂಜುಡೇಶ್ವರ ಅವರು.ಚಿತ್ರಕ್ಕೆ ಕಥೆ ಬರೆದು ನಿರ್ಮಾಣ ಮಾಡಿದ್ದಾರೆ. ಆಕಾಶ್ ಪರ್ವ ಸಂಗೀತ ನಿರ್ದೇಶನ. ವೆಂಕಿ ಸಂಕಲನ. ಕಿರಣ್ ಕುಮಾರ್ ಛಾಯಾಗ್ರಹಣ. ಆರ್ ಚಂದ್ರಶೇಖರ್. ಡಾ.ಪ್ರಭು ಗಂಜಿಹಾಳ್.ವೀರೇಶ್ ಅವರ ಪ್ರಚಾರ ಕಾರ್ಯ ಚಿತ್ರಕ್ಕಿದೆ.

ಇದೀಗ ಉತ್ತರ ಕರ್ನಾಟಕದ ಭಾಗದಲ್ಲಿ ಸಿನಿಮಾ ಬಿಡುಗಡೆ ಮಾಡಲು ನಿರ್ಧರಿಸಲಾಗಿದ್ದು. ಬರುವ ೨೯ ಕ್ಕೆ ಹುಬ್ಬಳ್ಳಿ ಮತ್ತು ಇನ್ನಿತರ ಕಿತ್ತೂರು ಕರ್ನಾಟಕ ಭಾಗದಲ್ಲಿ ಚಿತ್ರ ಬಿಡುಗಡೆ ಮಾಡಲಾಗುತ್ತಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕರ ಪರವಾಗಿ ಅವರ ಸೋದರ ಚಂದ್ರಶೇಖರ್ ಅವರು ಇದ್ದರು.

WhatsApp Group Join Now
Telegram Group Join Now
Share This Article
error: Content is protected !!