ಚಿಕ್ಕಮ್ಮನ ಮೇಲೆ ಅತ್ಯಾಚಾರಕ್ಕೆ ಯತ್ನ
ಕೊಲೆ ಮಾಡಿದ ಎಸ್ಎಸ್ಎಲ್ಸಿ ಬಾಲಕ
ಅತ್ಯಾಚಾರಕ್ಕೆ ವಿರೋಧ ವ್ಯಕ್ತಪಡಿಸಿದ್ದ ಚಿಕ್ಕಮ್ಮನನ್ನೇ ಬಾಲಕನೊಬ್ಬ ಕೊಲೆ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರ್ನೆ ಗ್ರಾಮದ ಬಿಳಿಯೂರು ಬಳಿ ನಡೆದಿದೆ.
ಅಕ್ಕನ ಮಗನೆಂದು ಎಸ್ಎಸ್ಎಲ್ಸಿ ಬಾಲಕನನ್ನು ಮನೆಯಲ್ಲಿ ಇಟ್ಟುಕೊಂಡಿದ್ದಳು. ಆತನೇ ಆಸರೆ ಕೊಟ್ಟ ಚಿಕ್ಕಮ್ಮನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಇದನ್ನು ವಿರೋಸಿದ್ದಕ್ಕೆ ಕೋಪಗೊಂಡು ಚಿಕ್ಕಮ್ಮಳನ್ನೇ ಕೊಲೆ ಮಾಡಿದ್ದಾನೆ.
ಅಕ್ಕನ ಎಸ್ಎಸ್ಎಲ್ಸಿ ಓದುತ್ತಿದ್ದ ಮಗನನ್ನು ಹೇಮಾವತಿ (೩೭) ಮನೆಯಲ್ಲಿ ಇರಿಸಿಕೊಂಡಿದ್ದಾಳೆ. ಆದರೆ, ಅಕ್ಕನ ಮಗ ಓದುವ ಬಾಲಕನಾಗಿದ್ದರಿಂದ ಆತ ತನ್ನ ಮೇಲೆ ಕಣ್ಣು ಹಾಕಿದ್ದಾನೆ ಎಂಬ ಅರಿವೂ ಆಕೆಗಿರಲಿಲ್ಲ. ಸಾಮಾನ್ಯ ದಿನಗಳಂತೆ ಹೇಮಾವತಿ ಊಟ ಮುಗಿಸಿ ಪ್ರತ್ಯೇಕ ಕೋಣೆಯಲ್ಲಿ ಮಲಗಿದ್ದಾರೆ. ತಡರಾತ್ರಿ ಆಗುತ್ತಿದ್ದಂತೆ ಬಾಲಕ ಚಿಕ್ಕಮ್ಮನ ಮೇಲೆ ಅತ್ಯಾಚಾರ ಮಾಡಲು ಮುಂದಾಗಿದ್ದಾನೆ. ಈ ವೇಳೆ ಆತನ ಅತ್ಯಚಾರ ಯತ್ನಕ್ಕೆ ವಿರೋಸಿ ಕೆನ್ನೆಗೆ ಒಂದು ಬಾರಿಸಿ ಕಳಿಸಿದ್ದಾಳೆ. ಜೊತೆಗೆ, ಹುಡುಗ ಬುದ್ಧಿಯಿಂದ ಹೀಗೆ ಮಾಡುತ್ತಿದ್ದಾನೆ ಎಂದು ಅರಿತು ಮನೆಯ ಇತರೆ ಸದಸ್ಯರನ್ನು ಎಬ್ಬಿಸದೇ ಸುಮ್ಮನೆ ಮಲಗಿದ್ದಾರೆ.
ಆದರೆ, ಬೆಳಗಾದರೆ ತನ್ನ ಬಗ್ಗೆ ಚಿಕ್ಕಮ್ಮ ಎಲ್ಲರೆದುರು ಅತ್ಯಾಚಾರ ಯತ್ನದ ಬಗ್ಗೆ ಹೇಳಿ ಮರ್ಯಾದೆ ಕಳೆಯುತ್ತಾಳೆ ಎಂದು ಹೆದರಿಕೊಂಡು ರಾತ್ರಿ ಮಲಗಿದ್ದ ಚಿಕ್ಕಮ್ಮನನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.