ಹುಬ್ಬಳ್ಳಿ; ಮೇ 7 ರೊಳಗೆ ನ್ಯಾಯ ಸಿಗದೇ ಇದ್ದಲ್ಲಿ justice for neha ಅಭಿಯಾನದ ಅಡಿಯಲ್ಲಿ ರಾಜ್ಯಾದ್ಯಂತ ನ್ಯಾಯ ಸಿಗುವವರೆಗೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ನೇಹಾ ತಂದೆ ಹಾಗೂ ಪಾಲಿಕೆ ಸದಸ್ಯ ನಿರಂಜನಯ್ಯ ಹಿರೇಮಠ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಭೇಟಿಯಾಗಿ ಮಗಳ ಸಾವಿನ ವಿಚಾರಣೆ ನಡೆಸಲು ಕುಟುಂಬದಿಂದ ಪ್ರತ್ಯೇಕ ವಕೀಲರನ್ನು ನೇಮಿಸಲು ಅವಕಾಶ ಕೊಡುವಂತೆ ಮನವಿ ಮಾಡಿದ್ದೇವೆ. ಸಚಿವರು ಸಿಎಂ, ಡಿಸಿಎಂ, ಗೃಹ ಸಚಿವರೊಂದಿಗೆ ಚರ್ಚಿಸುವುದಾಗಿ ಹೇಳಿದ್ದಾರೆ ಎಂದರು.
ಈ ಹಿಂದೆ ಸಿಎಂ ಭೇಟಿಯಾದ ಸಂದರ್ಭದಲ್ಲಿ ಕೆಲವು ಬೇಡಿಕೆಗಳನ್ನು ಇಟ್ಟಿದ್ದೇನೆ. ಹಾಗೂ ತೀವ್ರ ಗತಿಯಲ್ಲಿ ಪ್ರಕರಣ ನಡೆಸುವಂತೆ ಒತ್ತಾಯಿಸಿದ್ದೆ, ಸರ್ಕಾರ ಈ ತನಿಖೆಯನ್ನು ಸಿಐಡಿಗೆ ವಹಿಸಿದೆ. ಈ ಹಿಂದೆ ನಾ ನೀಡಿದ ದೂರಿನಲ್ಲಿ ಇದರ ಹಿಂದೆ ಇನ್ನು ಹಲವಾರು ಭಾಗಿಯಾಗಿರುವ ಕುರಿತು ಕೆಲವರ ಹೆಸರುಗಳನ್ನು ತಿಳಿಸಿದ್ದೆ. ಆದರೆ ಈವರೆಗೆ ಆರೋಪಿಯೊರ್ವನನ್ನೇ ಬಂಧಿಸಲಾಗಿದೆ. ಉಳಿದವರ ಬಂಧನವಾಗಲಿ ಅಥವಾ ತನಿಖೆಯಾಗಲಿ ನಡೆದಿಲ್ಲ. ಇದು ನನಗೆ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ ಎಂದರು.