ತಪೋವನದ ಸೇವೆ ಶ್ಲಾಘನೀಯ: ಜಿಲ್ಲಾಧಿಕಾರಿ ಡಾ. ವೆಂಕಟೇಶ
ದಾವಣಗೇರೆ: ತಪೋವನ, ದೊಡ್ಡಬಾತಿಯಲ್ಲಿ ರಾಜ್ಯ ಮಟ್ಟದ ಸಮನ್ವಯ ಸಂಸ್ಥೆ ಕರ್ನಾಟಕ (ಪ್ರಾಯೋಜಿತ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ, ಭಾರತ ಸರ್ಕಾರ -ನವದೆಹಲಿ), ವಿಶೇಷಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ದಾವಣಗೆರೆ. ತಪೋವನ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ, ದಾವಣಗೆರೆ. ತಪೋವನ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ,ದಾವಣಗೆರೆ, ತಪೋವನ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್, ದಾವಣಗೆರೆ. ಇವರುಗಳ ಸಂಯುಕ್ತಾಶ್ರಯದಲ್ಲಿ ಅಂತಾರಾಷ್ಟ್ರೀಯ ಮಾದಕ ವಸ್ತುವಿನ ವಿರೋಧಿ ದಿನ ಆಚರಣೆ ಹಿನ್ನೆಲಯಲ್ಲಿಮಾದಕ ವಸ್ತುವಿನ ವ್ಯಸನವನ್ನು ತಡೆಗಟ್ಟುವ ಕುರಿತು ಕಾರ್ಯಾಗಾರ ನಡೆಯಿತು.
ರಾಜ್ಯ ಮಟ್ಟದ ಸಮನ್ವಯ ಸಂಸ್ಥೆ ರಾಜ್ಯ ಸಂಯೋಜಕರಾದ ಶೈಲಾಶ್ರೀರವರು ರಾಜ್ಯದಲ್ಲಿ ೩೭ಐಆರ್‌ಸಿ ಕೇಂದ್ರಗಳ ಕಾರ್ಯವೈಖರಿ ಕುರಿತು ತಿಳಿಸಿದರು.
ಪ್ರಾಸ್ತಾವಿಕ ನುಡಿಯಲ್ಲಿ ಡಾ. ಗಂಗಾಧರ್ ರವರು ಅತಿಯಾದ ಮಾದಕವಸ್ತುಗಳ ಸೇವನೆಗೆ ಒಳಗಾದಾಗ, ಪುನರ್ವಸತಿ ಕೇಂದ್ರಗಳಲ್ಲಿ ಆಯುರ್ವೇದ ಮತ್ತು ಪ್ರಕೃತಿ ಚಿಕಿತ್ಸಾ ವಿಧಾನಗಳ ಕುರಿತು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವದೆಲ್ಲಡೆ ಮಾದಕವಸ್ತುಗಳ ವಿರೋ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಮಾದಕವಸ್ತು ಒಂದು ಸಾಮಾಜಿಕ ಪಿಡುಗು ಸಾಮಾಜಕ್ಕೆ ಅಂಟಿದ ಶಾಪವಾಗಿದೆ. ನಗರ ಮತ್ತು ಕೊಳಗೆರೆ ಪ್ರದೇಶದಲ್ಲಿ ಹೆಚ್ಚು ಮಾದಕವಸ್ತುಗಳಿಗೆ ಬಲಿಯಾಗುತ್ತಿದ್ದಾರೆ ಮಾದಕ ದ್ರವ್ಯಗಳ ಸೇವನೆಯಿಂದ ಆರ್ಥಿಕ ಅಭಿವೃದ್ಧಿಗೆ ತೊಂದರೆ ಆಗುತ್ತಿದೆ ಎಂದು ತಿಳಿಸಿದರು.
ಮಾದಕವಸ್ತುಗಳಿಗೆ ಬಲಿಯಾದರೆ ಕಳ್ಳತನ, ಸುಲಿಗೆ, ಕೊಲೆಗಳು, ಹೆಚ್ಚು ನಡೆಯುತ್ತವೆ ಎಂಬ ಮಾಹಿತಿಯನ್ನು ತಿಳಿಸಿದರು, ಇವುಗಳನ್ನು ತಡೆಯಲು ಐಆರ್‌ಸಿ ಸೆಂಟರುಗಳ ಚಿಕೆತ್ಸೆಯಿಂದ ಸಮಾಜಕ್ಕೆ ತೊಂದರೆ ಆಗದಂತೆ ನೋಡಬಹುದು, ತಪೋವನದ ಸೇವೆ ಬಗ್ಗೆ ಶ್ಲಾಘನೀಯ ಎಂದರು.
ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿ, ಮಾದಕವಸ್ತುಗಳ ಬಗ್ಗೆ ಎಲ್ಲರೂ ಜಾಗೃತರಾಗಬೇಕು. ೧೯೮೫ ಆಕ್ಟ್ ಬಗ್ಗೆ ಮಾಹಿತಿ ನೀಡಿ, ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ ಎಂದರು. ಪ್ರತಿಜ್ಞಾವಿ ಬೋಧಿಸಿದರು. ನಂತರ ಡಾ. ಶಶಿಕುಮಾರ್ ಸಾಮಾಜಿಕ ಸೇವೆ ಕುರಿತು ಶ್ಲಾಘನೆ ಮಾಡಿದರು.
ನಂತರ ಜಿಲ್ಲಾ ಆಯುಷ್ ಇಲಾಖೆಯ ಡಾ. ಯೋಗೇಶ್ ರವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷರಾದ ಡಾ.ವಿ.ಎಂ.ಶಶಿಕುಮಾರ್ ಮಾತನಾಡಿ, ರೋಗ ಬರುವುದಕ್ಕಿಂತ ಮುಂಚೆ ಮುಂಜಾಗ್ರತೆ ವಹಿಸುವುದು ಮುಖ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾದಕವಸ್ತುಗಳ ವಿರೋಧಿ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ಮತ್ತು ಪ್ರಮಾಣಪತ್ರವನ್ನು ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು ಶಶಿಕುಮಾರ್ ಅವರು ವಿತರಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಮಾದಕವಸ್ತುಗಳ ವಿರೋಸುವ ಕುರಿತು ನಾಟಕ ಪ್ರದರ್ಶನ ಮಾಡಿದರು,ಕಾರ್ಯಕ್ರಮದಲ್ಲಿ ತಪೋವನ ಸಂಸ್ಥೆಯ ಡಾಕ್ಟರ್ಸ್, ವಿದ್ಯಾರ್ಥಿಗಳು, ಸಿಬ್ಬಂದಿವರ್ಗದವರು, ,ಜೆ ಎಸ್ ಎಸ್ ಕಲಿಕಾರ್ಥಿಗಳು, ಸಿಬ್ಬಂದಿವರ್ಗ ದವರು, ೬೦೦ ಕ್ಕೂ ಅಧಿಕ ಜನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.