ನೇಹಾಳ ಹತ್ಯೆಯಲ್ಲಿ ಕಾಣದ ಕೈಗಳ ಕೈವಾಡ
ಸಿಐಡಿ ಮುಂದೆ ಸತ್ಯಾಂಶ ಬಿಚ್ಚಿಟ್ಟ ನಿರಂಜನ ಹಿರೇಮಠ
ಹುಬ್ಬಳ್ಳಿ: ನೇಹಾಳ ಹತ್ಯೆಯಲ್ಲಿ ಕಾಣದ ಕೈಗಳ ಕೈವಾಡವಿರುವುದಾಗಿ ಮಂಗಳವಾರ ತನಿಖೆ ನಿಮಿತ್ತ ಮನೆಗೆ ಭೇಟಿ ನೀಡಿದ ಸಿಐಡಿ ಡಿಜಿಪಿ ಎಂ.ಎ.ಸಲೀಂ ಅವರ ಎದುರು ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರು ಸಂದೇಶ ವ್ಯಕ್ತಪಡಿಸಿದ್ದಾರೆ.
ನೇಹಾಳನ್ನು ಹತ್ಯೆಗೈದ ಆರೋಪಿಗೆ ಕಠಿಣ ಶಿಕ್ಷೆ ವಿಸಿ. ಪ್ರಕರಣದಲ್ಲಿ ಭಾಗಿಯಾದ ಎಲ್ಲರನ್ನು
ಬಂಸಿ ಎಂದು ತಿಳಿಸಿರುವುದಾಗಿ ಹೇಳಿದರು.
ನೇಹಾ ಹಿರೇಮಠ ಹಾಗೂ ಅಂಜಲಿ ಅಂಬಿಗೇರ ಪ್ರಕರಣಕ್ಕೆ ನ್ಯಾಯ ಒದಗಿಸಲಾಗುವುದು. ರಾಷ್ಟ್ರವೇ ನೋಡುವಂತಹ ಶಿಕ್ಷೆ ಆರೋಪಿಗಳಿಗೆಯಾಗಲಿದೆ ಎಂಬ ಭರವಸೆಯನ್ನು ಸಿಐಡಿ ಡಿಜಿಪಿ ನೀಡಿದ್ದಾರೆ ಎಂದು ಹೇಳಿದರು.
ಮಕ್ಕಳನ್ನು ಕಳೆದುಕೊಂಡ ನಮ್ಮ ಹಾಗೂ ಅಂಬಿಗೇರ ಕುಟುಂಬ ಸಂಕಟವನ್ನು ಅನುಭವಿಸುತ್ತಿವೆ. ನಮಗಾದ ಅನ್ಯಾಯ ಯಾವುದೇ ಕುಟುಂಬಕ್ಕೆ ಆಗದಿರಲಿ. ಈ ನೋವು ಮತ್ಯಾರಿಗೂ ಬಾರದಿರಲಿ. ತಾವುಗಳು ಕೂಡಲೇ ನ್ಯಾಯ ಒದಗಿಸಿ ಎಂದು ಮನವಿ ಮಾಡಿರುವೆ ಎಂದು ತಿಳಿಸಿದರು.