Ad imageAd image

ಮಾನವನ ಸೇವೆಯೇ ಮಾಧವನ ಸೇವೆ

Hubballi Dhwani
ಮಾನವನ ಸೇವೆಯೇ ಮಾಧವನ ಸೇವೆ
WhatsApp Group Join Now
Telegram Group Join Now

ಇಂದು ಬಿಜೆಪಿ ಯುವ ಮುಖಂಡ, V.A.K ಫೌಂಡೇಶನ್ ಸಂಸ್ಥಾಪಕರಾದ ವೆಂಕಟೇಶ್ ಕಾಟವೆ ಅವರನ್ನು ಕ್ಷತ್ರಿಯ ಸಂದೇಶ್ ಮಾಸ ಪತ್ರಿಕೆ ಹಾಗೂ ಹುಬ್ಬಳ್ಳಿ ಧ್ವನಿ ಪ್ರಧಾನ ಸಂಪಾದಕರಾದ ರಾಮು ಲದವಾ ಹಾಗೂ ವರದಿಗಾರರಾದ ಲೋಹಿತ್ ಬಸವಾ ಅವರು ವೆಂಕಟೇಶ್ ಕಾಟವೆ ಅವರ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಸುಮಾರು ವರ್ಷದಿಂದ ಸೇವೆ ಮಾಡುತ್ತಿರುವ ವಿವರವುಳ್ಳ ವಿಶೇಷ ಲೇಖನದ ಲ್ಯಾಮಿನೇಟೆಡ್ ಪ್ರತಿಯನ್ನು ಸ್ಮರಣಿಕೆಯಾಗಿ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ರಾಮು ಲದವಾ ಅವರು ಮಾತನಾಡಿ ವೆಂಕಟೇಶ್ ಕಾಟವೆ ಅವರು ಕೊರೋನಾ, ಪ್ರವಾಹ ಹಾಗೂ ಇನ್ನಿತ್ತರ ಸಂದರ್ಭದಲ್ಲಿ ಎಲ್ಲ ವರ್ಗದ ಬಡ ಜನರ ಬೆನ್ನಲುಬುವಾಗಿ ನಿಂತು ತನು, ಮನ ಧನದಿಂದ ಸಹಾಯ ಮಾಡಿ ಧೈರ್ಯ ತುಂಬಿದ್ದು ಹೆಮ್ಮೆಯ ಸಂಗತಿ,

ಬಡ ವಿದ್ಯಾರ್ಥಿಗಳಿಗೆ ಸಾವಿರಾರು ಶಾಲೆಯ ಬ್ಯಾಗ, ಪುಸ್ತಕ ಹಾಗೂ ಅಗತ್ಯವಿರುವ ಎಲ್ಲ ವಸ್ತುಗಳನ್ನು ಉಚಿತ ನೀಡಿದ್ದಾರೆ,ಇವರು ಪರಿಸರ ಪ್ರೇಮಿಯಾಗಿರುವುದರಿಂದ ಸುಮಾರು 25 ಸಾವಿರಕ್ಕಿಂತ ಹೆಚ್ಚು ಗಿಡ ನೆಟ್ಟಿದ್ದು ಇವರ ಬಹು ಮುಖ್ಯ ಪಾತ್ರವಾಗಿದೆ.

ಧಾರ್ಮಿಕ ಕ್ಷೇತ್ರದಲ್ಲಿ ಸದಾ ಮುಂಚೂಣೆಯಲ್ಲಿದ್ದು ಗಣೇಶ್ ಚತುರ್ಥಿ, ದಸರಾ ಹಬ್ಬ ಹಾಗೂ ಅನೇಕ ಹಿಂದೂ ಕಾರ್ಯಕ್ರಮದಲ್ಲಿ ಪ್ರಸಾದ ಸೇವೆ, ದವಸ ಧಾನ್ಯ ವಿತರಿಸಿ ಎಲ್ಲರ ಮನೆ ಮಗನಾಗಿ ನಿರಂತರ ಸೇವೆ ಮಾಡುತ್ತಿದ್ದಾರೆ.

SSK ಕ್ರಿಕೆಟ್ ಟೊರ್ನಾಮೆಂಟ್, ಕರುನಾಡು ಪ್ರೇಮಿಯರ ಲೀಗ್(KPL) ಮತ್ತು ಹತ್ತು ಹಲವಾರು ಕ್ರೀಡೆಯಲ್ಲಿ ನೇತೃತ್ವ ವಹಿಸಿ ಯುವಕರಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ,ಶ್ರೀ ತುಳಜಾಭವಾನಿ ಭವಾನಿ ವೃತ್ತದಲ್ಲಿ ಶ್ರೀ ಸಹಸ್ರಾರ್ಜುನ ಮಹಾರಾಜರ ಲೈಟಿನ ಬ್ಯಾನರ್ ವೆಂಕಟೇಶ್ ಅವರು ಕೊಡುಗೆ ನೀಡಿದ್ದು ಹೆಮ್ಮೆಯ ವಿಷಯ.ಮುಂದಿನ ದಿನಗಳಲ್ಲಿ ನೀವು ಒಬ್ಬ ಸಮರ್ಥ ನಾಯಕನಾಗಿ ಬೆಳೆದು ಸಮಾಜಕ್ಕೆ ಇನ್ನು ಹೆಚ್ಚಿನ ಸೇವೆ ಮಾಡಲಿ ಎಂದು ತಾಯಿ ಜಗದಂಬೆಯಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಮಾಜದ ಯುವ ಮುಖಂಡರಾದ ದೇವದಾಸ್ ಹಬೀಬ, ಪ್ರವೀಣ್ ಪವಾರ, ಸಚಿನ್ ಕಾಟವೆ, ವಿಕಾಸ ಪವಾರ, ಸಚಿನ್ ಪೂಜಾರಿ, ಆನಂದ ಬಾಕಳೆ,ಮಂಜು ಊಟವಾಲೆ,ಪುನೀತ್ ಕಬಾಡೆ,ರಾಹುಲ್ ಬಂಕಾಪುರ್, ವಿಜಯ ಪವಾರ, ಯಲಪ್ಪ ಕಾಟವೆ,ಶ್ರೀಧರ ಕಲ್ಬುರ್ಗಿ,ನಾರಾಯಣಸಾ ಹಬೀಬ, ಅಮೃತ್ ಪವಾರ ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article
error: Content is protected !!