ತಪೋವನದಲ್ಲಿ ಯೋಗದಿನ ಆಚರಣೆ
ದಾವಣಗೆರೆ: ತಪೋವನದಿಂದ 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂ.21ರಂದು ಸಮೀಪದ ದೊಡ್ಡಬಾತಿಯಲ್ಲಿನ ಕಾಲೇಜಿನ ಆವರಣದಲ್ಲಿ ಆಚರಿಸಲಾಯಿತು.
ಬೆಳಗ್ಗೆ 6 ಗಂಟೆಗೆ ತಪೋವನದ ಚೇರ್ಮನ್ ಡಾ. ಶಶಿಕುಮಾರ ವಿ.ಮೆಹರವಾಡೆ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಹರಿಹರ ಶಾಸಕ ಬಿ.ಪಿ.ಹರೀಶ, ಮಾಜಿ ಶಾಸಕ ಎಚ್.ಎಸ್.ಶಿವಶಂಕರ ಕಾಂಗ್ರೆಸ್ ಮುಖಂಡ ಶ್ರೀನಿವಾಸನಂದಿಗಾವಿ, ನೇಚರ ಕೇರ್ಗಂಗಾಧರ ವರ್ಮ, ಆರ್.ಟಿ.ಪ್ರಶಾಂತ್ ದುಗ್ಗತ್ತಿಮಠ, ರವೀಂದ್ರ ಗುರೂಜಿ, ವೆಂಕಟೇಶಮೂರ್ತಿ, ನಳಿನಾಕ್ಷಿ, ಎಸ್.ಆರ್ ಪೂರ್ಣಿಮ, ಬಿ.ಜೆ.ದೇವರಾಜ ಇತರರು ಭಾಗವಹಿಸಿದ್ದರು.